ಯಾರಿಗ್ ಹೇಳೋಣ…??

10710712_10152770726833887_6675922243033691251_n

ಇತ್ತೀಚೆಗಷ್ಟೇ ನಾನು ನನ್ನ ಮಡದಿ, ನನ್ನ ಹುಟ್ಟೂರು ತೀರ್ಥಹಳ್ಳಿಗೆ ಹೋಗಿದ್ವಿ. ಯಾರಿಗೆ ಆಗಲಿ, ಅವರೂರಿಗೆ ಹೋಗುತ್ತಿದ್ದಾರೆ ಅಂದ್ರೆ, ಅದೇನೋ ಜೋಷು, ಉತ್ಸಾಹ, ಸಹಜ. ನನಗೂ ಹಾಗೆಯೇ. ನನ್ನ ಮಡದಿಯ ಮೊದಲನೇ ಆಗಮನ. ಹಾಗಾಗಿ ಅವಳ ಉತ್ಸಾಹ, ಆತುರತೆ, ತವಕ ದುಪ್ಪಟ್ಟು. ನಾನು ಒಂಥರಾ ಟೂರ್ ಮ್ಯಾನೇಜರ್ (Tour manager), ಎಲ್ಲಾ ಜಾಗಗಳ ಪರಿಚಯ, ಅಡ್ಡಾಡಿ ಬೆಳೆದ ಹಾದಿ-ಬಿದಿಗಳ ನೋಟ, ಗ್ರಹಿಸಿದ ಸಣ್ಣ-ಸಣ್ಣ ಮಾಹಿತಿ, ಎಲ್ಲವನ್ನೂ ಹಂಚಿಕೊಳ್ಳ ಬೇಕಾದರೆ ಅದೇನೋ ಹುಮ್ಮಸ್ಸು, ಹೆಮ್ಮೆ. ನನಗಿದ್ದ ಎರಡು ಆಸೆ, ಒಂದು ನಾನು ಹುಟ್ಟಿ ಬೆಳದ ಮಲೆನಾಡಿನ ಮನೆ ಮತ್ತು ಹತ್ತಿರವಿರುವ ಕುಪ್ಪಳಿಯ, ರಾಷ್ಟ್ರಕವಿ ಕುವೆಂಪು ಅವರ ಮನೆ, ಸುತ್ತ-ಮುತ್ತ ಜಾಗಗಳ ದರುಶನ ಮಾಡಿಸಬೇಕುಮ್ಬುದು. ಎರಡು ಇಡೆರಿತು.

ಅನೇಕ ಬಾರಿ ಹೋಗಿದ್ದೀನಿ. ಪ್ರತಿ ಸಾರಿಯೂ, ಅದೇನೋ ವಿಸ್ಮಯ, ಅಲ್ಲಿಯ positive energy, calmness, refresh ಮಾಡುತ್ತಿತ್ತು. ಆದರೆ ತುಂಬಾನೇ ಬೇಸರ ತಂದ ವಿಷ್ಯ ಏನಂದ್ರೆ, ಕುಪ್ಪಳಿಯ ಕುವೆಂಪು ಅವರ ಮನೆಯ ಒಳಗೆ-ಹೊರಗೆ, ಅದೊಂದು ಪಿಕ್ನಿಕ್ (Picnic) ಸ್ಪಾಟ್ (spot) ಥರ ನಮ್ಮ ಜನ ಅವರಿಗೆ ಹೇಗೆ ಬೇಕೋ ಹಾಗೆ ಬಳಸುತ್ತಿದ್ದಾರೆ. ಸದಾ ಗಲಾಟೆ, ಕಿರಚಾಟ, ಚೀರಾಟ, ಚೆಂಡುಗಳ ಎಸೆದಾಟ, ತಿಂಡಿ-ತಿನಿಸುಗಳ ದೃಶ್ಯಾ… ಏನಾಗ್ತಿದೆ ಇಲ್ಲಿ ಅನ್ನೋ ಪ್ರಶ್ನೆ, ಬೇಜಾರು… ಶಾಂತಿ, ನೆಮ್ಮದಿ, ಪ್ರೀತಿ, ಸೌಹಾರ್ದತೆ, ಹಿರಿಮೆ, ಘನತೆ, ಶಿಸ್ತು, ಸಂಸ್ಕೃತಿ ಇವೆಲ್ಲ ನೆಲೆಸಿರುವ ಈ ಮನೆಯಲ್ಲಿ, ಇಂಥ ಬೆಳೆವನಿಗೆಗಲ್ಲನ್ನಾ ನಾವು ನೋಡಿಕೊಂಡು, ಒಬ್ಬರಿಗೊಬ್ಬರು ಮೌನದಲ್ಲೇ, ನಿಟ್ಟುಸಿರು ಬಿಟ್ಟು, ಸುಮ್ಮಾನಾಗಬೇಕೆ?

ಅದಕ್ಕೆ ಸಂಭಂದ ಪಟ್ಟ ರಕ್ಷಣಾ ಸಿಬ್ಬಂದಿಗೆ ಕೇಳಿದೆ, ಅವನು ಹೇಳಿದ್ದು – ‘ಇದು ಕಮ್ಮಿ ಸಾರ್, ನೀವು ನೋಡಿದ್ದು, ಕೇಳಿದ್ದು, ದೊಡ್ಡ-ದೊಡ್ಡ ಗ್ಯಾಂಗೇ ಬರತ್ತೆ, ಎಷ್ಟು ಹೇಳಿದರು ಕೇಳಲ್ಲ… ನಾನು ಹೇಳ್ತಾನೆ ಇದೀನಿ ಮಾರಾಯ್ರೇ, ಇಂಥ ಮಂದಿಗೆ…ಗಲಾಟೆ ಮಾಡ್ಬೇಡಿ, ಸುಮ್ನೆ ಓದಿ-ನೋಡಿ, ಅನುಭವಸಿ, ಆನಂದಿಸಿ ಅಂತ… ಒಳ್ಳೆ ಮಂಗಗಳ ಥರ ಆಡ್ತಾರೆ’ ಅಂತ ನಗುತ್ತಲೇ ಹೇಳಿ ಹೋದ ಆ ಮನಷ… ಸರಿ ಬಿಡು ಅಂತ ಹೇಳಿ, ಹೊರಗೆ ಬಂದು, ಅಲ್ಲೇ ಒಂದು sixty ಬಿಸಿ-ಬಿಸಿ ಮಲೆನಾಡಿನ ವಿಶೇಷ ಕಷಾಯ ಕುಡಿದು, energize ಮಾಡಿಕೊಂಡು, ಕವಿಶೈಲ ಕಡೆಗೆ ಹೊರಟ್ವಿ.

1560469_10152770727108887_1577219574373733067_n

ಕುವೆಂಪುರವರ ಸಮಾಧಿ. Online downloaded.

‘ಕವಿಶೈಲ’ ಒಂದು ಸ್ಪೂರ್ತಿ. ಕುವೆಂಪು ಅವ್ರು ಕುಳಿತು ಬರೆಯುತ್ತಿದ್ದ ಸ್ಥಳ. ಹಾಗೆಯೇ ಅವರ ಸಮಾಧಿ ಕೂಡ ಇಲ್ಲೇ ಇದೆ. ಇದೊಂದು ಪವಿತ್ರವಾದ ಜಾಗ. ನಮ್ಮ ಜನಕ್ಕೆ ಈ ಭೂಮಿಯ ವೈಶಿಷ್ಟ್ಯತೆ ಏನು? ಎಂಥಾ ನೆಲದ ಮೇಲೆ ನಿಂತಿದ್ದಿನಿ! ಇದರ ಕಿಂಚಿತ್ತು ಪರಿಜ್ಞಾನವಿರಲಿ, ಜ್ಞಾನವೇ ಇಲ್ಲಾ! ಬಿಳಿ ಪಟ್ಟಿಯ ಒಂದು ಚೌಕದಲ್ಲಿ ಬರೆದಿದ್ದಾರೆ, ಟಿ.ಎಸ್.ವೆಂ, ಕುವೆಂಪು, ಬಿ.ಎಂ.ಶ್ರೀ … ಇವರು ಕುಳಿತು, ಮಾತಾಡಿದ ಜಾಗಾ ಎಂದು ಪಟ್ಟಿಯಿಂದ ಸೂಚಿಸಿದ್ದಾರೆ, ಆದರೂ ಕೂಡ ಸಾರ್ವಜನಿಕರು ಅದರ ಮೇಲೆ ಕಾಲು ಇಟ್ಟುಕೊಂಡು, ಕೂತು, ಫೋಟೋಗಳನ್ನ ಕ್ಲಿಕ್ಕಿಸುತ್ತಾರೆ, ಜೋರಾಗಿ ಹೇಳಿಕೊಳ್ಳುತಾರೆ, ‘ಹೇಯ್ ಇದು ನನ್ನ FB profile piccu ಅಂತ…!’ ಇದಲ್ಲದೆ, ಅವರ ಸಮಾಧಿಯ ಮೇಲು ಕೂಡ, ಧರಿಸಿದ ಚಪ್ಪಲಿಗಳನ್ನು ಬಿಚ್ಚದೆ, ಕುಳಿತು, ಫೋಟೋಗ್ರಫಿ ಮಾಡಿಕೊಳ್ಳುತ್ತಾರೆ.

ಮೂರು ವಯಸ್ಕ ಪಡ್ಡೆ ಹುಡುಗರು, ಗೀಚುತ್ತಿದ್ದರು, ನಾ ಅವರಿಗೆ ಹೇಳ್ದೆ, ಬೇಡ್ರಪ್ಪ, ಯಾಕೆ ಈ ಕೆಲಸ ಮಾಡ್ತಿದ್ದಿರಾ… ಇದೆಲ್ಲಾ ಮಾಡ್ಬೇಡಿ… ಅವರಲ್ಲೊಬ್ಬ ನನ್ನ ಠಿಕಿಸಿ, ‘ಎಲ್ಲಾರು ಬರ್ದಿದಾರೆ… ನಾವು ಕೂಡ…ನಾವು ಬಂದು ಹೋದ್ವಿ ಅಂತ ಇಲ್ಲಿ ಪ್ರೂಫ್ (proof) ಇರ್ಬೇಕು, ಅದಿಕ್ಕೆ ಬರಿತಿದ್ದಿವಿ…’ ಅಂದ… ಅಲ್ಲೇ ಒಂದು ಫಲಕ ಕೂಡ ಇದೆ, ಕಲ್ಲಿನೆ ಮೇಲೆ ಅಥವಾ ಸುತ್ತಾ-ಮುತ್ತಾ ಕೆತ್ತಬೇಡಿ, ಗೀಚಬೇಡಿ… ‘ದಯವಿಟ್ಟು’ ಅಂತ ಕೂಡ ಬೇಡಿಕೊಂಡಿದ್ದಾರೆ. ಸುಮಾರು ಜನ ಹಸ್ತಾಕ್ಷರಗಳನ್ನ ಚೂರು ಕೂಡ ಮುಲಾಜೆ ನೋಡದೆ, ರಾಜಾರೋಷವಾಗಿ ಗೀಚಿಹೊಗಿದ್ದಾರೆ, ಗೀಚುತ್ತಿದ್ದಾರೆ ಮತ್ತು ಗೀಚುತ್ತಾರೆ!

ಕನ್ನಡಕ್ಕೆ, ಕನ್ನಡಾಂಬೆಗೆ ಇವರ ಕೊಡುಗೆ ಅಪಾರ! ಕನ್ನಡ ಬರೀ ಒಂದು ಭಾಷೆ ಅಲ್ಲಾ, ಭಾಷೆಗೂ ಮೀರಿದ ಸಂಸ್ಕೃತಿ, ಜೀವನ, ಅಂತರಾಳ ಮುಂತಾದವು…ಅಂತ ಜಗತ್ತಿಗೆ ಹೇಳಿಹೊದವರು, ಈ ಮಹನೀಯರು! ತುಂಬಾ ಕಡೇ ಹೀಗೆ ಆಗ್ತಿದೆ ಅಂತ ಗೊತ್ತು, ಆದ್ರೆ ಇದೊಂದು latest ಅನುಭವ. ಇದರ ಹಿಂದೆ ಇರೋ concern, ಹೇಗೆ ಸಂರಕ್ಷಣೆ ಮಾಡಬಹುದು ಇಂಥದ್ದನೆಲ್ಲಾ?

Advertisements

2 thoughts on “ಯಾರಿಗ್ ಹೇಳೋಣ…??

  1. Dhabyavada. Jeevana sarthakathe honduvudu kavishailadalli matra. Enthavarigu bhava spurane aguva jaaga ‘kavi shaila’ matra.. thanks madan

  2. Nice write-up brother. I will try to make a news coverage what you are complining about. Let us try to solve the problem.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s